🕉️ *ದಾರಿದೀಪೋಕ್ತಿ*🏵️
26/03/25, 5:24:11 AM] Gireesha K:. *ದೇವರು ನಮಗೆ ಏಕೆ ಕಾಣಿಸುವುದಿಲ್ಲ* ?
*ದೈವಂ ಮಾನುಷ ರೂಪೇಣ* !
ದೇವರು ಎಂದೂ ದೇವರಾಗಿ ಕಾಣಲು ಅವಕಾಶವಿಲ್ಲ.
ಆಗುವುದಿಲ್ಲ. ಮನುಷ್ಯರೂಪದಲ್ಲಿ ಮನುಷ್ಯರ ಮನಸ್ಸುಗಳಲ್ಲಿ ಪ್ರವೇಶ ಮಾಡಿ ನಮಗೆ ಸಹಾಯ ಮಾಡುತ್ತಾನೆ. ದಾರಿತೋರಿಸುತ್ತಾನೆ. ಬುದ್ದಿ ಹೇಳುತ್ತಾನೆ.
ನಮಗಾಗಿ ಏನೆಲ್ಲಾ ಮಾಡುತ್ತಾನೆ.
ದೇವರು ನಮಗೆ ಕಾಣಬೇಕೆಂಬ ಆಸೆಗಿಂತಲೂ ನಾವು ದೇವರಿಗೆ ಕಾಣಿಸುವ ಮಾರ್ಗವನ್ನು ಬಯಸಬೇಕು!
*ದಿನಾಲು ಗುಡಿಗೆ ಹೋಗಿ ಬರುವುದರಿಂದ ಉಪಯೋಗವಿಲ್ಲ. ಕಾಣಿಕೆ ಹಾಕಿ ಕಾಯಿ ಒಡೆಯುವುದರಿಂದ ಉಪಯೋಗವಿಲ್ಲ*. ಕರುಣೆಯಿಂದ, ಪ್ರೇಮದಿಂದ, ನೀತಿಯಿಂದ, ನಿಯಮದಿಂದ, ಸದಾಚರಣೆಯಿಂದ, ಸನ್ಮಾರ್ಗದಿಂದ ಸತ್ಯ-ಧರ್ಮ-ನ್ಯಾಯದಿಂದ ಬದುಕು ಸಾಗಿಸಬೇಕು! ಆಗ ಯಾವುದೇ ರೂಪದಲ್ಲಾದರೂ ನಮ್ಮನ್ನು ಹುಡುಕುತ್ತಾ ದೇವರೇ ಬರುತ್ತಾನೆ.
*ಸತ್ಯಂ ವದ,ಧರ್ಮಂ ಚರ* ' . 🙏 *ನಮಸ್ತೆ* 🍀 *ಶುಭೋದಯ* 🌸 *ಶುಭದಿನ* ☘️ *ಸರ್ವೇಜನಾಃ* *ಸುಖಿನೋಭವಂತು** 🍁
[26/03/25, 5:59:49 AM] Seetharamaiah Srinivas: ಅದ್ವೈತ-ಬೌದ್ದ-(ಮಾದ್ಯಂದಿನ) - ನಾಸ್ತಿಕ ದರ್ಶನಗಳಲ್ಲಿನ ಸಾಮಾನ್ಯತೆ ಇಲ್ಲಿ ಎದ್ದು ಕಾಣುತ್ತದೆ. ದೇವರ ಸೃಷ್ಟಿಯಲ್ಲಿ ದೇವರನ್ನು ನೋಡುವುದು ಸಾಧ್ಯವಾಗಬೇಕಾದರೆ ದೇವರಲ್ಲಿನ ಭಕ್ತಿ ಸಾಕಾರ ವಾದಾಗ ಮಾತ್ರ. ಇಲ್ಲವಾದಲ್ಲಿ ಅದು ಒಂದು ರೀತಿಯ ಮಾರಲ್ ಫಿಲಾಸಫಿ ಆಫ್ ವೆಸ್ಟರ್ನ್ ಆರಿಜಿನ್ ಗೆ ಸೀಮಿತ.
ಆದರೆ ನಮ್ಮ ದರ್ಶನ ಶಾಸ್ತ್ರ ದಲ್ಲಿರುವ ಧರ್ಮ ಅರ್ಥ ಕಾಮ ಮೋಕ್ಷ ಗಳಿಗಾಗಿ ಸಿದ್ಧತೆ ಅದಕ್ಕಿಂತ ಉತ್ತಮ ಜೀವನದ ರೂಪುರೇಷೆ ನೀಡಬಲ್ಲದು. 🙏🙏
[27/03/25, 5:42:29 PM] Gireesha K: 🙏 ಅದಕ್ಕೇ, ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಶ್ರೀ ಶಂಕರಾಚಾರ್ಯರನ್ನ ಪ್ರಚ್ಛನ್ನ ಬುದ್ಧ ಎಂದೂ ಕೆಲವರು ಸಂಬೋಧಿಸುತ್ತಾರೆ.
[27/03/25, 6:57:12 PM] Seetharamaiah Srinivas: ಅದ್ವೈತವಾಗಲಿ ಬುದ್ಧನ ಸಿದ್ಧಾಂತ ವಾಗಲಿ ಸರಿಯಾಗಿ ಅರ್ಥೈಸದೆ ಇದ್ದಲ್ಲಿ ನಾವು ಬಹಳ ಸುಲಭ ದಿಂದ ನಾಸ್ತಿಕವಾದಕ್ಕೆ ತೆರಳುತ್ತೇವೆ.
ಚಾರ್ವಾಕರಾಗಿ ಸಮಾಜದ ವ್ಯವಸ್ಥೆ ಕುಸಿದು ಬೀಳಲೂ ಬಹುದು.
ಇದೇ ಕಾರಣಕ್ಕೆ ನಮ್ಮಲ್ಲಿ ಭಕ್ತಿ ಪರಂಪರೆ ಉಳಿಸಲು ರಾಮಾನುಜ ಮಧ್ವರ ಉಗಮ ವಾಗಿದ್ದು. ೧೧-೧೨ ಶತಮಾನಗಳಲ್ಲಿ ಪ್ರಾರಂಭವಾದ ಭಕ್ತಿ ಸಾಹಿತ್ಯ - ಸಿದ್ಧಾಂತ ವನ್ನು ನಾವು ಗೌರವಿಸಬೇಕಾದ ಅವಶ್ಯಕತೆ ಬಹಳವಾಗಿದೆ. ಹಾಗಾಗಿ ದ್ವೈತ ವಿಶಿಷ್ಟಾದ್ವೈತ ಅಷ್ಟೇ ಪ್ರಮುಖ ಸಿದ್ಧಾಂತ ವಾಗಿ ರೂಪುಗೊಂಡಿದೆ. Like a counter force. We can see the fate of people who blindly followed Buddhism in China, Srilanka etc and this did not happen in India due to the counter forces of Bhakti movement which kept us saner and stronger.

No comments:
Post a Comment